Friday, 16 February 2018

ಮಳೆ ನಿಂತರು ನಿಲ್ಲದ ತುಂತುರು…..


ಗೆಳೆಯ!!! ಇಂದು ನಿನ್ನ ನೆನಪು ಬೆಂಬಿಡದೆ ಕಾಡುತಿದೆ. ಕುಂತರು ನಿಂತರು ನಿನ್ನದೇ ತುಂತುರು,,, ಯಾಕೋ ಹೀಗೆ ನನ್ನ ಕಾಡಿಸ್ತಾ ಇದ್ದೀಯಾ'' ಒಂದಿಲ್ಲೊಮ್ಮೆಗೆ ಯಾಕಿಷ್ಟು ಹಚ್ಚಿಕೊಂಡೆ ನಿನ್ನನು, ನಾನು????

ಮೊದಮೊದಲು ನೀನು ನನ್ನನ್ನು ಮಾತನಾಡಿಸಲು ಬಂದಾಗಲೆಲ್ಲಾ , ನಿನ್ನ ಜೊತೆ ಮಾತನಾಡುವುದೆಂದರೆ ನನಗೇನೊ ಬೇಜಾರು  ಇವನ್ಯಾಕೆ ಹೀಗೆ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು ಮನದ ಒಳಗೊಳಗೇ ಬೈದು ಕೊಳ್ಳುತ್ತಿದ್ದೆ…

ಆದರೆ!!! ನೆನ್ನೆ ಜೋರು ಮಳೆ, ಬಸ್ಸಿಗಾಗಿ ಕಾಯುತ್ತಾ ನಿಂತ ನನ್ನ ಬಳಿ ಬಂದು ನಿಂತೆಯಲ್ಲಾ ಅದೂ ಮಳೆಯಲ್ಲಿ ನನ್ನೊಂದಿಗೆ ನೆನೆಯುತ್ತಾ,,,, ಆಗಲೇ ನಾನು ನಿನ್ನ ಮೊದಲ ಬಾರಿ ಸರಿಯಾಗಿ ನೋಡಿದ್ದು, ನಿನಗೆ ನನ್ನೊಂದಿಗೆ ಮಾತನಾಡಬೇಕೆಂಬ ಹಂಬಲ, ನಾನು  ನೆನೆಯುತಿದ್ದೇನಲ್ಲಾ  ಎಂಬ ಬೇಸರದ ನಡುವೆಯು ಕದ್ದು ನೋಡುತಿದ್ದಾ ಆ ನಿನ್ನ ಕಣ್ಣುಗಳು ಇಷ್ಟ ವಾಗಿ ಬಿಟ್ಟವು….......

ಎಷ್ಟು ಕಾದರೂ ಬಸ್ಸಿನ ಸುಳಿವೇ ಇಲ್ಲ, ಕೇಳಲು
 ಮುಜುಗರವೆನಿಸಿದರು ಮನಸ್ಸಿನಲ್ಲಿ ಧೈರ್ಯ ಮಾಡಿಕೊಂಡು,,,, ನೀನು "ಬನ್ನಿ ನಾನು ಡ್ರಾಪ್ ಮಾಡ್ತೀನಿ ಮಳೆ ನಿಲ್ಲೋಲ್ಲ ಅನಿಸುತ್ತದೆ,, ಎಂದು ನನ್ನೊಬ್ಬಳಿಗೆ ಮಾತ್ರವೇ ಕೇಳಿಸುವಷ್ಡು ಮೆಲ್ಲಗೆ ಹೇಳಿದೆ,,, ನಾನು ಬೇಡವೆಂದು ನಿರಾಕರಿಸಿದರು” ಅರೆಕ್ಷಣದ ಅಂತರದಲ್ಲಿ ಬೈಕ್‌‌‌ ಹತ್ತಿ ಕೂತಿದ್ದೆ!!,,,

 ಒದ್ದೆಯಾದ ಬಟ್ಟೆಯಲ್ಲಿ ಮೈ ಭಾರವೆನಿಸಿದರು ಮನಸ್ಸು ಹಗುರವೆನಿಸಿತು….
ಮೊದಲು ಬೈಕ್ ಸ್ಟಾರ್ಟ್ ಆಗದೆ ಹೋದಾಗ ನಿನ್ನ ಕೋಪ, ಗಾಬರಿ ಕಂಡು ನನ್ನ ಮನದ ಒಳಗೊಳಗೆ ನಾನು ನಕ್ಕಿದ್ದೆ.. ನೀನು ಮಳೆಯಲ್ಲಿ ಒಂದೊಂದು ಸಲ ಹೀಗೆ ಬೇಜಾರಾಗಬೇಡಿ ಎಂದು ಬೈಕ್ ಸ್ಟಾರ್ಟ್ ಮಾಡಿ ,, “ಎಕ್ಸಲೇಟರ್ ಕೊಟ್ಟು ಸ್ಪೀಡ್ ಜಾಸ್ತಿ ಮಾಡಿದಾಗ ನನ್ನ ಹೃದಯವು ಕೂಡ ಅಷ್ಟೇ ಸ್ಪೀಡಾಗಿ ಬಡಿದುಕೊಂಡಿತು”…
ದಾರಿಯಯದ್ಧಕ್ಕೂ ನಮ್ಮಿಬ್ಬರ ಮೌನ ಜಿಟಿ ಜಿಟಿ ಮಳೆಯಲ್ಲೂ ಕೇಳಿಸುವಂತ್ತಿತ್ತು!!!!

 ಮನೆಗೆ ಅನತಿ ದೂರದಲ್ಲಿ ಬೈಕ್ ನಿಲ್ಲಿಸಿದಾಗ ,,, ನನ್ನ ನೋಡಿದ ಆ ನಿನ್ನ ನೋಟದಲ್ಲಿ ಪ್ರೀತಿಯ ಅರ್ಜಿಯನ್ನು ಕಣ್ಣುಗಳಲ್ಲೇ ಹಿಡಿದು ನಿಂತಂತಿತ್ತು…. ನಾನು ಧ್ಯಾಂಕ್ಸ ಹೇಳಿ ಮುಂದೆ ನಡೆದು ಬಂದು ಮನೆಯ ಗೇಟ್ ತೆಗೆದು ಒಳಗೆ ಹೋಗುವವರೆಗೂ ,,,, ಏನನ್ನೋ ಪಡೆದು ಕೊಳ್ಳಬೇಕೆಂಬ ನಿರೀಕ್ಷೆ ಯಲ್ಲಿ ಇನ್ನೂ ಅಲ್ಲಿ ಯೇ ನಿಂತಿದ್ದೆ ನೀನು.. ಮನೆಯ ಒಳಗೆ ಬಂದಾಕ್ಷಣ ಧಡ ಧಡನೆ ಮೆಟ್ಟಿಲು ಹತ್ತಿ ಬಾಲ್ಕನಿಗೆ ಬಂದು,,, ಬಾಯ್ !!!!!!!! ಎಂದು ಸನ್ನೆ ಮಾಡಿ ನಕ್ಕಾಗಲೇ , ಮರು ಜೀವ ಬಂದ ಪಕ್ಷಿಯಂತಾಗಿ ಬೈಕ್ ಸ್ಟಾರ್ಟ್ ಮಾಡಿ ನಿಂತ ಜಾಗದಲ್ಲಿಯೇ ಮೂರು ಸುತ್ತು ಸುತ್ತಿಸಿ !!! ರಸ್ತೆಯ ಕೊನೆಯ ತಿರುವಿನಲ್ಲೊಮ್ಮೆ  ನಿಧಾನವಾಗಿ ಬೈಕ್ ತಿರುಗಿಸಿ ನೀನು ನನ್ನ ನೋಡಿದ ಆ ಕ್ಷಣವೇ ನಾ ಸೋತು ಹೋಗಿದ್ದೇನೆ….

ಒಂದು ರಾತ್ರಿ ಕಳೆದಿದೆ ಅಷ್ಟೇ… ಎಷ್ಟೋ ದಿನಗಳ ಒಡನಾಟವೆಂಬಂತೆ ಇಂದು ಮುಂಜಾನೆಯಿಂದ ಮನದ ಮನೆಯ ತುಂಬೆಲ್ಲಾ ನಿನ್ನ ಸುಪ್ರಭಾತವೇ……


                                        ದಿವ್ಯ ಭರತ್…..

6 comments:

  1. ಇಳೆಗೆ ಬರುವ ಮಳೆ ಇಂತಹ ಜಾದೂ ಮಾಡುತ್ತದೆ.. ಮರದ ಎಲೆಗಳ ಕೋಣೆಯಿಂದ ತೊಟ್ಟಿಕ್ಕುವ ನೀರಿನ ಹನಿಯಂತೆ ಮಳೆಯಲ್ಲಿ ನೆಂದ ಮನಕ್ಕೆ ನೆನಪುಗಳು ಮಧುರ ಭಾವ ಮೂಡಿಸುತ್ತದೆ. .

    ಈ ಲೇಖನ ಓದಿ ಒಮ್ಮೆ ಕಣ್ಣ ಮುಚ್ಚಿ ಕುಳಿತೆ.. ಸ್ವಲ್ಪ ಹೊತ್ತು ಅದೇ ಗುಂಗಿನಲ್ಲಿ ಕೂತಿದ್ದೆ.. ನಂತರ ಕಣ್ಣು ಬಿಟ್ಟಾಗ.. ಅರೆ ಒದ್ದೆಯಾಗಿದ್ದ ಬಟ್ಟೆಯೆಲ್ಲಾ ಒಣಗಿ ಹೋಯಿತೇ ಅನ್ನಿಸಿತು..

    ಆ ಸುಂದರ ಪರಿಸರಕ್ಕೆ ಕರೆದುಕೊಂಡು ಹೋಗುವ ಶಕ್ತಿ ನಿನ್ನ ಬರಹದಲ್ಲಿ ಇದೆ.. ಸುಂದರ ದೃಶ್ಯವನ್ನು ಕಣ್ಣಿಗೆ ಕಟ್ಟುವ ಹಾಗೆ ಪಸರಿಸಿದ ನಿನ್ನ ಬರಹಕ್ಕೆ ನನ್ನದೊಂದು ಸಲಾಂ..

    ಅಭಿನಂದನೆಗಳು ಬ್ಲಾಗ್ ಲೋಕಕ್ಕೆ ಕಾಲಿಟ್ಟದ್ದಕ್ಕೆ ಡಿಡಿಪಿ

    ಸುಂದರ ಬರಹ!

    ReplyDelete
  2. ಅಣ್ಣ ನಿಜಕ್ಕೂ ನಿಮ್ಮ ಅನಿಸಿಕೆ ನೋಡಿ ತುಂಬಾ ಖುಷಿ ಆಯ್ತು.. ನಿಮ್ಮ ಮಾತುಗಳು ಇನ್ನೂ ಹೆಚ್ಚು ಹೆಚ್ಚು ಬರೆಯಲು ಸ್ಪೂರ್ತಿ ನೀಡಿವೆ.. ಧನ್ಯವಾದಗಳು ದಿವ್ಯಾಂತರಂಗಕೆ ಸ್ವಾಗತ.

    ReplyDelete
  3. ಮಳೆ ನಿಂತರು ನಿಲ್ಲದ ತುಂತುರು...ಶೀರ್ಷಿಕೆ ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ಆಕರ್ಷಕವಾದ ಬರವಣಿಗೆ.ಶುಭಾರಂಭದ ಲೇಖನ ಬಹಳ ಸೊಗಸಾಗಿ ಮೂಡಿಬಂದಿದೆ.ದಿವ್ಯಾಂತರಂಗದಲ್ಲಿ ಮತ್ತಷ್ಟು ಭಾವತರಂಗಗಳು ಹೊಮ್ಮಿ ಬರಲೆಂಬ ಸದಾಶಯ

    ReplyDelete