ಶಾರದಾ ಕ್ಲೀನಿಕ್ ಎದುರು ಅಪ್ಪ ಛತ್ರಿ ಹಿಡಿದು ನಿಂತಿದ್ದರು!!!!
ನನಗೆ ಮೊದಲಿನಿಂದಲೂ ಅಪ್ಪ ಎಂದರೆ ಭಯ ಅಷ್ಟೇ ಗೌರವ.ಅಮ್ಮನೊಂದಿಗಿನ ತುಂಟಾಟ ಅಪ್ಪನೊಂದಿಗಿಲ್ಲದಿದ್ದರು ಒಡನಾಟಕ್ಕೇನು ಕಮ್ಮಿ ಇರಲಿಲ್ಲ.
ಅಪ್ಪನಿಗೆ ಈ ಮಳೆ ಎಂದರೆ ಆಗೋಲ್ಲ ಅದರಲ್ಲೂ ಅಪ್ಪಿ ತಪ್ಪಿ ನಾನು ನೆನೆದು ಬಂದರೆ ಮನೆಯಲ್ಲಿ ಬೈಸಿಕೊಳ್ಳುವುದಂತು ತಪ್ಪುತ್ತಿರಲಿಲ್ಲ.
ಎಲ್ಲೊ ಒಮ್ಮೊಮ್ಮೆ ತಾರಸಿ ಮೇಲೆ ಒಣ ಹಾಕಿದ ಬಟ್ಟೆ ತೆಗೆದುಕೊಂಡು ಬರುವಾಗ ಒಂದೆರಡು ಹನಿ ತಲೆಯ ಮೇಲೆ ಕಂಡರು ಸಾಕು! ಟವಲ್ ತಗೊಂಡು ಬಂದು ಒರೆಸ್ತಾ ಜೊತೆಗೆ ಅಮ್ಮನಿಗೆ ಜೋರಾಗಿ ಕೂಗಾಡ್ತಾ ಕ್ಲಾಸ್ ತಗೋಳೋರು"
ನೀನು ಹೋಗೋಕೇನು? ಈ ಮಗೂನ ಕಳಿಸಿದ್ಯ!!
ಅದು ಈ ಮಳೆಲಿ, ಮೆಟ್ಟಿಲು ಇಳಿವಾಗ ಜಾರಿದ್ರೆ, ನೋಡು ನೆನೆದು ಬಂದಿದೆ ಅಂತ.
ವಾ!! ಅಪ್ಪನ ಕಾಳಜಿಯಲ್ಲಿ ಬದುಕುವುದು ಎಂದರೆ ಅದೊಂದು ಸ್ವರ್ಗ!! ಪೂರ್ವ ಜನ್ಮದ ಪುಣ್ಯ....
ಆದರೆ, ಅಮ್ಮನಿಂದ ಒಂದೇ ಪ್ರತ್ಯುತ್ತರ, " ಹೌದು!! ನಾನು ನೆನೆದರು ಸರಿಯೇ ನಿಮ್ಮ ಕಂದ ನೆನೆಯ ಬಾರದು ಅಲ್ವಾ?
ಕೇಳಿ!! ನಾನು ಕಳಿಸಿದ್ದು ಯಾವಾಗ ಕೆಳೆಗೆ ಬಂದಿರೋದು ಯಾವಾಗ ಅಂತ ಸುಮ್ಮನೆ ಬೈಯೋದು ನನ್ನ ಅಂತ ಅಮ್ಮ ಕೋಪದಲ್ಲಿ ಅಪ್ಪನಿಂದ ಟವಲ್ ಕಿತ್ತುಕೊಂಡು ತಾನು ಒರೆಸೊಕೆ ಬಂದರೆ ಸಾಕು ಅಪ್ಪ ಗಬ್ ಚುಪ್!!!
ಹೀಗೆ ಒಂದು ದಿನ ಟ್ಯೂಷನ್ನಿಂದ ಬರುವಾಗ ಮಳೆಯಲ್ಲಿ ನೆನೆದು ಬಂದು ಬಿಟ್ಟೆ.
ಬರುವಾಗ ಏನೋ, ಅಪ್ಪ ಇನ್ನೂ ಆಫೀಸ್ಸೀನಿಂದ ಬಂದಿರುವುದಿಲ್ಲ ಎಂಬ ಮೊಂಡು ಧೈರ್ಯವಿತ್ತು ಆದರೆ,,, ಬಾಗಿಲಲ್ಲಿ ಬಿಟ್ಟಿದ ಅಪ್ಪನ ಚಪ್ಪಲಿ ನೋಡಿಯೇ ನೆನೆದು ಬಂದಿದ್ದ ಮೈ ತತ್‌ಕ್ಷಣವೇ ನಡುಗಲು ಶುರುವಾಗಿದ್ದು!!!
ಮನಸ್ಸಿನಲ್ಲಿ ಯೋಚಿಸಿ ನಿಂತುಕೊಂಡೆ ಅಯ್ಯೋ!! ನನ್ನ ಕಥೆ ಮುಗಿಯಿತು ಹೇಗೆ ಒಳಗೆ ಹೋಗೋದಪ್ಪಾ??
ಅಷ್ಟರಲ್ಲಿ ನನ್ನಪ್ಪ ಹಜಾರದಿಂದ ಓಡಿ ಬಂದು, ಹೆಗಲ ಮೇಲಿದ್ದ ಬ್ಯಾಗ್ ತೆಗೆದುಕೊಂಡ, ಇವ್ಳೇ ಇವ್ಳೆ ( ಒಮ್ಮೊಮ್ಮೆ ಅಪ್ಪ ಅಮ್ಮನನ್ನು ಹೀಗೆಯೇ ಕರೆಯುವುದು) ಬಾರೆ ಬೇಗ! ಟವಲ್ ತಗೋ ಬಾರೇ,, ಮಗು ನೆಂದಿದೆ,, ಥೂ! ನಾನು ಮರೆತೇ ಬಿಟ್ಟೆ ಛತ್ರಿ ಹಿಡಿದು ಕೊಂಡು ಹೋಗಬೇಕಿತ್ತು.. ಇವಳಿಗೆ ಆ ಅಡಿಗೆಮನೆ! ತರಕಾರಿ! ಸಾಂಬರ್! ಇಷ್ಟೇ ಪ್ರಪಂಚ ಎಂದು ಕೂಗಾಡಿದರು...
ಅಮ್ಮ ಟವಲ್ ಹಿಡಿದು ಬಂದ್ಲು!! ಒಂದು ರೀತಿ ತಪ್ಪು ಮಾಡಿದ ಭಾವನೆಯಲ್ಲಿ, ಈ ಮಳೆ ಬರುವ ಹಾಗೆ ಇರ್ಲಿಲ್ಲಾ ರೀ ಅಂತ ಬಡಬಡಿಸಿದಳು..
ನಾನಂತು ಯಾವುದೋ ಯುದ್ಧದಿಂದ ಪಾರಾದೆ, ನನಗೆ ಬೈಯಲಿಲ್ಲವಲ್ಲ ಎಂಬ ನಿರಾಳತೆಯಲ್ಲಿ ಆ ರಾತ್ರಿ ನಿದ್ರಿಸಿದೆ...
ಬೆಳಗ್ಗೆ ಕೊಂಚ ನೆಗಡಿ ಶುರುವಾಗಿದ್ದನ್ನು ಕಂಡು, ಅಪ್ಪ ಶಾಲೆಗೆ ಕಳಿಸಲು ಸುತಾರಾಂ ಒಪ್ಪಲಿಲ್ಲ..
ನಾನು ಅಮ್ಮನ ಸೆರಗಿಡಿದು ಕಣ್ಣಲ್ಲೇ ಹೇಳಿದೆ,, ಅಳುವ ಹಾಗೆ ಮುಖ ಮಾಡಿ!
ನನ್ನ ಅರ್ಥ ಮಾಡಿಕೊಂಡ ಅಮ್ಮ ರೀ!!! ಅವ್ರ ಸ್ಕೂಲ್ ಟೀಚರ್ ್್್ ಎಂದು ಮಾತು ಮುಗಿಸುವಷ್ಟರಲ್ಲಿ"""
ಅದ್ಯಾವ ಟೀಚರ್?? ನನಗೆ ಗೊತ್ತಿಲ್ವಾ ಎಂದು ಹೌಹಾರಿಬಿಟ್ಟರು,, ಈಗ ಅಮ್ಮ, ನಾನು ಇಬ್ಬರೂ
ಗಬ್ ಚುಪ್!!!
ಸಂಜೆ ಕಳೆಯುವುದರೊಳಗೆ ನನಗೆ ಜ್ವರ ಬಂದು ಬಿಟ್ಟಿತ್ತು. ಅಮ್ಮ ಪಕ್ಕದಲ್ಲಿ ಕೂತು ಹಣೆಗೆ ತಣ್ಣೀರು ಬಟ್ಟೆ ಇಟ್ಟು " ಅವ್ರು ಬಂದ ಮೇಲೆ ಹೇಗೋ ಎಂದು ಹೆದರುತ್ತಾ" ದೇವರ ಮುಂದೆ ಕುಳಿತು ಹತ್ತು ಕಾಲು ರೂಪಾಯಿ ಕೈಯಲ್ಲಿ ಹಿಡಿದು ಹರಕೆ ಕಟ್ಟುತ್ತಿದ್ದಳು..
ಅಪ್ಪ ಮನೆಗೆ ಬಂದಿದ್ದೆ ತಡ ರೂಮಿಗೆ ಬಂದು ನನ್ನ ಕಂಡು ...
ಮಗುಗೆ ಜ್ವರ ಬಂದಿದೆ ಇವಳು ದೇವರು ಅಂದುಕೊಂಡು ಕುಂತಿದ್ದಾಳೆ ಬುದ್ಧಿ ಇಲ್ಲ ಬುದ್ಧಿ ಇಲ್ಲಾ!!! ಅಂದು, ಛತ್ರಿ ಹಿಡಿದು ಚಪ್ಪಲಿ ಹಾಕಿ ಮಳೆಯಲ್ಲಿ ಹೊರಟೇ ಬಿಟ್ಟರು...
ಹೋಗಿ ಎರಡು ಗಂಟೆಯಾದರು ಎಲ್ಲಿ ಹೋದರು ಎಂದು ತಿಳಿಯದೆ ಅಮ್ಮ ಒಬ್ಬಳೆ ಏನೇನೂ ಮಾತಾಡುತ್ತಿದ್ದಳು..
ಅಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಾಯಿತು.. ಅಮ್ಮ ಫೋನ್ ಎತ್ತಿದ್ದೆ ತಡ! ಆಟೋ ಕಳಿಸಿದ್ದೀನೆ ಬರುತ್ತೆ ಈಗ, ಮಗುಗೆ ಸ್ವೆಟರ್ ಹಾಕಿ, ಶಾಲು ಒದಿಸಿಕೊಂಡು ಶಾರದ ಕ್ಲೀನಿಕ್ ಹತ್ತಿರ ಬಾ!! ಸುಮ್ಮನೆ ಆ ಬಾಗಿಲು ಈ ಬಾಗಿಲು ಹಾಕುತ್ತಾ ತಡ ಮಾಡ ಬೇಡ ತಿಳಿತಾ..
ನಾನು ಟೋಕನ್ ತೆಗೆದುಕೊಂಡು ಕಾದಿದ್ದೀನಿ, ಇನ್ನಿಬ್ಬರಿದ್ದಾರೆ ಅಷ್ಟೇ...
ಆಟೋ ಇಳಿದಾಗ ಶಾರದ ಕ್ಲೀನಿಕ್ ಮುಂದೆ ನನ್ನ ಅಪ್ಪ ಹೌದು ನನ್ನಪ್ಪ ಛತ್ರಿ ಹಿಡಿದಿದ್ದರು!!
ಆದರೂ ಪೂರ್ತಿಯಾಗಿ ನೆನೆದಿದ್ದರು ಆದರೆ, ಅದ್ಯಾವುದರ ಅರಿವೇ ಇಲ್ಲದೆ,, ನನಗಾಗಿ ಕಾಯುತ್ತಿದ್ದರು...
ಆ ದಿನ ಆ ಕ್ಷಣ!!
ಎಷ್ಟೋ ವರುಷಗಳು ಕಳೆದು ಹೋಗಿವೆ!!!
ಇಂದು ಅಪ್ಪ ನಿಂತಿದ್ದ ಅದೇ ಶಾರದ ಕ್ಲೀನಿಕ್ ಈಗ ಶಾರದ ನರ್ಸಿಂಗ್ ಹೊಂ ಆಗಿದೆ ಅದರ ಹೊರಗೆ ನಾನು ಮಗಳು ನಿಂತಿದ್ದೀನಿ.. ಒಳಗೆ ಅದೇ ಶಾರದಮ್ಮನವರ ಮೊಮ್ಮಗ ಡಾ!! ಸುರೇಶ್ ಇದ್ದಾರೆ...
ಮೊನ್ನೆ ಅಮ್ಮನಿಗೆ ಹೇಳಿದ್ದೆ ಅಪ್ಪನನ್ನು ವಾಕಿಂಗ್ಗೆ ಕಳಿಸ ಬೇಡ, ಜಿಡಿ ಮಳೆಯಿದೆ ಎಂದು..
ಜೊತೆಗೆ ಅಪ್ಪನವರಿಗು ಹೇಳಿದ್ದೇ ಅಪ್ಪ ಹೋಗಬೇಡಿ ನೆನೆದರೆ ತಡೆಯಲ್ಲ ನೀವು ಆಯ್ತಾ ಅಂತ..
ಆಗ ಅಪ್ಪ..
ಅಯ್ಯೋ !! ಬಂಗಾರಿ ಮಳೆ ಶುರುವಾದಗಿಂದ ಮನೇಲಿನೆ ಠಿಕಾಣಿ.. ಕೇಳು ನಿಮ್ಮಮ್ಮನ ಎಂದರು..
ಆದರೆ ಇವತ್ತು ಬೆಳಗ್ಗೆ ಎದ್ದು ಅಪ್ಪ ಅಪ್ಪ ಎಂದಯ ಕೂಗಿದರೆ ಸದ್ದೇ ಇಲ್ಲಾ!!!
ಇವರೂ ದಿನಾ! ಕಣ್ಣುತಪ್ಪಿಸಿ ವಾಕಿಂಗ್ ಗೆ ಹೋಗೊದು ಬಿಡಲ್ಲ ಎಂದೂ ಅಮ್ಮನ ಮೇಲೆ ಕೂಗಾಡಿದೆ...
ಆಗ ಅವರೂ ಈಗ ಇವಳು,, ನಾನೊಬ್ಬಳೆ ಇಲ್ಲಿ ಬಿಟ್ಟಿಯಲ್ಲಿ ಬಿದ್ದಿದ್ದೀನಿ !! ಚಿಕ್ಕವನು ಫಾರಿನ್ ಗೆ ಹೋಗದೆ ಇದ್ದಿದ್ದರೆ ನನಗೆ ಅವನಾದ್ರು ಜೊತೆಯಾಗ್ತಾ ಇದ್ದ ಎಂದು ಅಮ್ಮ ಗೊಣಗಿದಳು,..
ನಾನು ಅಮ್ಮನನ್ನು ಮೆಲ್ಲಗೆ ತಬ್ಬಿಕೊಂಡು ಕಿವಿಯಲ್ಲಿ ಕೇಳಿದೆ?? ಟಿಕೆಟ್ ಟಿಕೆಟ್ ಬುಕ್ ಮಾಡ್ಲಾ ಅಂತ!!
ಹು! ಹು! ನೀವಿಬ್ಬರು ಸೇರಿ ಕಳಿಸೋರೆ ಬಿಡಿ ಅಂದಳು..
ಅಮ್ಮ ನಿನ್ನ ಬಿಟ್ಟು ನಾನು ಅಪ್ಪ ಇರೋದಾ !! ನೋ ಚಾನ್ಸ...
ನಾ ಹೇಳಿದ್ದು ಮೂವೀ ಟಿಕೇಟ್ ಅಮ್ಮ..
ನಿನ್ನ ಫೇವರೇಟ್ ನಾಗರಹಾವು ಮತ್ತೆ ರಿಲೀಸ್ ಆಗಿದೆ ಗೊತ್ತಾ..
ಮೇರೆ ಸಪನೋಕಿ! ರಾಣಿ ಕಬ್ ಆಯೆಗೀತೂ!!
ಎಂದು
ಅಮ್ಮನ ಕೆನ್ನೆಗೊಂದು ಮುತ್ತು ಕೊಟ್ಟೆ..
ಸರಿ ಅಮ್ಮ ಬೈ ..
ಅಪ್ಪ ಬಂದ್ರೆ ಹೇಳು ನಾನು ಸಂಜೆ ಬೇಗ ಬರ್ತೀನಿ ಮೂವೀ!! ನಾಗರಹಾವು!!...
ಅದರಂತೆಯೇ ಆಫೀಸ್ಸೀನಿಂದ ಬೇಗ ಮನೆಗೆ ಬಂದರೆ ಅಪ್ಪನಿಗೆ ಜ್ವರ!! ಅಮ್ಮ ಅದೇ ದೇವರು ಹರಕೆ ಅಂತ ಕಟ್ಟಿ ಕುಂತಿದ್ದಾಳೆ..
ಎಷ್ಟು ಸಲ ಹೇಳಿದ್ದೀನಿ..
ಕೈಗೊಂದು ಮೊಬೈಲ್ ಕೊಟ್ಟಿದ್ದು ಚಾರ್ಜ್ ಮಾಡಿ ಇಡೋಕಲ್ಲ, ಏನಾದರು ಇದ್ದಾಗ ತಕ್ಷಣ ತಿಳಿಸಿ ಅಂತ..
ನಿಮಗಾ ಬುದ್ಧಿ ಬರೋಲ್ಲ ಎಂದು ಪರ್ಸ ತೆಗೆದುಕೊಂಡು ಚಪ್ಪಲಿ ಹಾಕುತ್ತ,, ಛತ್ರಿ ಕೊಡಮ್ಮ ಅಂದೆ..
ಅಮ್ಮ!! ಅವ್ರೇ ಕಣೇ,,
ಮಗು ಗಾಬರಿ ಆಗುತ್ತೆ ಫೋನ್ ಮಾಡಬೇಡ ಅಂದಿದ್ದು ಅದಕ್ಕೆ ಮಾಡ್ಲಿಲ್ಲ ಅಂತ ಛತ್ರಿ ಕೈಗೆ ಕೊಟ್ಟರು ..
ಹೋಗ್ಲಿ ಎಲ್ಲಿಗೆ ಹೋಗ್ತಾ ಇದ್ದೀಯಾ ಹೇಳೇ,!!!
ಈ ಮಳೆಲಿ ಎಂದು ಕೇಳುತ್ತಲೆ ಇದ್ದಳು!!!
ನಾನು ಒಂದೇ ಉಸಿರಿಗೆ ನಡೆದು ಬಂದು.. ಅಪಾಯ್ಂಟ್ಮೆಂಟ್ ತೆಗೆದುಕೊಂಡೆ..
ಅಪ್ಪನ ನಂಬರಿಗೆ ಕಾಲ್ ಮಾಡಿ,
ಅಮ್ಮ ಅಪ್ಪನಿಗೊಂದು ಸ್ವೆಟರ್ ಹಾಕಿ,, ಶಾಲು ಒದಿಸಿಕೊಂಡು,, ಹಳೆಯ ರಿಪೋರ್ಟ್ ತೆಗೆದುಕೊಂಡು ,, ಹೊರಗೆ ಬಾ ಕ್ಯಾಬ್ ಬುಕ್ ಮಾಡಿದ್ದೀನಿ ಈಗ ಬರುತ್ತೆ ನಾನು ಶಾರದ ನರ್ಸಿಂಗ್ ಹೋಮ್ ನಲ್ಲಿ ಇದ್ದೀನಿ ಎಂದು ಹೇಳಿದೆ...
ನಾವು ಬೆಳೆಯುತ್ತಿದ್ದೇವೆ!! ಅಂದು ಅಪ್ಪ ನನಗೆ... ಇಂದು ನಾನು ಅಪ್ಪನಿಗೆ..
ಮುಂದೆ ನನ್ನ ಮಗನಿಗೆ ನಾನು!!
ನನಗೆ ನನ್ನ ಮಗ ಒಬ್ಬರಿಗೊಬ್ಬರು
ಹೇಳುತ್ತೇವೇನು!!
ಈ ಮಳೆಯಲ್ಲಿ ನೆನೆಯದಿರೆಂದು....
ದಿವ್ಯ ಭರತ್

No comments:
Post a Comment