ನಿನ್ನನ್ನೆ ನೆನೆಯುತ್ತ
ಪ್ರೀತಿಯ ಕೌತುಕುವ
ಕಣ್ಣಲ್ಲೇ ಕಲ್ಪಿಸುತ್ತ!
ಮನೆಯ ಬಾಗಿಲ
ತೆರೆದು,
ಕಟ್ಟಿದ್ದ ತೋರಣವನ್ನೊಮ್ಮೆ
ನೋಡಿ!!
ರಂಗೋಲಿಯನ್ನಿಟ್ಟು!!.
ಕತ್ತಲು ತುಂಬಿದ ನೆರಳಲ್ಲಿ
ಒಬ್ಬಳೇ ಲಾಟೀನು ಇಡಿದು
ನೀ ಬರುವ ದಾರಿಯ
ಕಾಯುತ್ತಾ ಕುಳಿತೆ,
ಪ್ರತಿ ಬಾರಿಯ
ಕ್ರಮಬದ್ಧ ಪೂಜವಿಧಿಯಂತೆ!
ಬಂದೆನ್ನ ಸೇರಿ ಬಿಡು
ನೀ ನನ್ನೆದೆಯಲಿ
ಪುನರಾವರ್ತನೆಯಾಗುವ
ಆ ದೇವನ ಸ್ತುತಿಯಂತೆ!!.
ದಿವ್ಯ ಭರತ್
Super title... and a deep thought well expressed.
ReplyDelete