ಸೂರ್ಯಾಸ್ತದ ಸಮಯದಲ್ಲಿ,
ಕಡಲ ಕಿನಾರೆಯಲ್ಲಿ ,
ನೀ ಕೈ ಹಿಡಿದು ನಡೆದರೆ,
ಇಂಪಾಗಿ ನಲಿಯುವುದು
ಈ ಧರೆ..
ಅಲೆಗಳ ತಾಳದಲ್ಲಿ,
ನಗುವಿನ ಮೇಳದಲ್ಲಿ,
ನಮ್ಮಿಷ್ಟದ ಹಾಡುಗಳ ನೀ ಗುನುಗಲು,
ಹೂಸ ಕನಸುಗಳು
ಬಂದು ನಿಲ್ಲುವವು
ತಾ ಮುಂದು ನಾ ಮುಂದೆಂದು....
ನೀ ಕೊಟ್ಟ ಸವಿನೆನಪುಗಳ,
ನಾ ಕೊಟ್ಟ ಸವಿಮುತ್ತುಗಳ,
ಮತ್ತೊಮ್ಮೆ ಮೆಲುಕು ಹಾಕುತ್ತಾ,
ನೀ ನನ್ನ ನಗಿಸಲು,ನಾನ್ನೊಮ್ಮೆ ನಾಚಲು
ಆ ಸೂರ್ಯನು ನಿಲ್ಲುವನು
ಕ್ಷಣ ಕಾಲ ಕದ್ದುನೋಡಲು....
ಸಾಗುತಿರಲಿ ಈ ಪ್ರೀತಿ,
ದೂರ ತೀರದ ಪಯಣಕ್ಕೆ ,,
ನಿಮಗೇಕೆ ಈ ಲೋಕದ
ಗೊಡವೆ ಎಂದು ! ಕಿವಿಮಾತನೇಳಿವೆ,
ಮರಳಿನ ಮೇಲಿನ ಹೆಜ್ಜೆ ಗುರುತುಗಳು
ಬಾ ಗೆಳೆಯ ನಡೆವ, ಈ ಜಗವ ಮರೆವ....
ದಿವ್ಯ ಭರತ್....
ಬದುಕು ಸುಂದರ ಕ್ಷಣಗಳಲೇ freeze ಆದರೆ ಎನಿತು ಚೆಂದ ಅಲ್ಲವೇ... 😊
ReplyDelete